ಬ್ರೌನ್ ಶುಗರ್ ಎಂಬುದು ಹೆರಾಯಿನ್ ಇನ್ನೊಂದು ಹೆಸರು.ಇದು ಒಂದು ಬಗೆಯ ಅಮಲುಪದಾರ್ಥ. ಇದು ಸಕ್ಕರೆಯಲ್ಲ,ಮಾನಸಿಕವಾಗಿ ಭ್ರಮಾಲೋಕದಲ್ಲಿರುವಂತೆ ಮಾಡುವ ಮಾದಕ ವಸ್ತು. ಇದರ ದುರುಪಯೋಗವು ಅನೇಕ ಯುವಕ-ಯುವತಿಯರ ಉಜ್ವಲ ಭವಿಷ್ಯವನ್ನು ಹಾಳು ಮಾಡಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಇವುಗಳನ್ನು ಮನೋರೋಗಿಗಳಿಗೆ ನಿಗದಿತ ಅನುಪಾತದಲ್ಲಿ ನೀಡಿದಾಗ ಔಷಧಿಯಾಗಿ ಬಳಕೆಯಾಗುವುದಾದರೂ ಬ್ರೌನ್ ಶುಗರ್ ನ ಅನಿರ್ಬಂದಿತ ಸೇವನೆಯು ಚಟವಾಗಿ ಪರಿಣಮಿಸಿ ಯುವಜನತೆ ಬದುಕನ್ನೇ ದುರ್ಭರವನ್ನಾಗಿಸಿಕೊಳ್ಳುವ ಅಪಾಯವಿದೆ ಎಚ್ಚರ. ಯಾವುದೇ ರೂಪದಲ್ಲಿ ಸೇವಿಸಿ ನೋಡುವ ಪ್ರಯತ್ನ ಮಾಡಲೇಬಾರದು. == ಉಲ್ಲೇಖಗಳು ==